Wednesday, April 18, 2012

ಹೃದ್ರೋಗದ ಮೂಲ ಕಿಡ್ನಿಯಲ್ಲಿದೆ

ಹೃದ್ರೋಗದ ಮೂಲ ಕಿಡ್ನಿಯಲ್ಲಿದೆ !
ಮಧುಮೇಹದಿಂದ ಮೂತ್ರಪಿಂಡ ಕಾಯಿಲೆ ಬಂದರೆ ಅದು ಹೃದಯ ಮತ್ತು ಮೆದುಳಿಗೆ ತುಂಬಾ ಅಪಾಯಕಾರಿಯಾಗುತ್ತದೆ. ಅಧ್ಯಯನವೊಂದರ ಪ್ರಕಾರ ಶೇ. 98 ತೀವ್ರತರರ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವವರು ಕೊನೆಕೊನೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಹತ್ತಿರವಾಗುತ್ತಾರೆ ಎಂಬುದು ದೃಢಪಟ್ಟಿದೆ. ಅಂದರೆ ಮಧುಮೇಹ ನೇರವಾಗಿ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಅದು ಕಿಡ್ನಿ ವೈಫಲ್ಯಕ್ಕೆ ದಾರಿಯಾಗುತ್ತದೆ. ಅದಕ್ಕೂ ಮುನ್ನ ಹೃದಯ ಮತ್ತು ಮೆದುಳಿಮವರೆಗೂ ಹಾದುಹೋಗುವ ರಕ್ತನಾಳಗಳಿಗೆ ಧಕ್ಕೆ ತರುತ್ತದೆ. ಹೀಗೆ ಒಂದಕ್ಕೊಂದು ಅನಪೇಕ್ಷೀಯ ಸಂಬಂಧ ಹೊಂದಿವೆ. ಅಂದರೆ ಕಿಡ್ನಿ ವೈಫಲ್ಯಕ್ಕೊಳಗಾದರೆ ಹೃದ್ರೋಗ ಗ್ಯಾರಂಟಿ ಅಥವಾ ಹೃದ್ರೋಗ ಬಂದರೆ ಕಿಡ್ನಿ ವೈಫಲ್ಯ ಉಚಿತ ಎನ್ನುವಂತಾಗಿದೆ. ಇನ್ನೂ ಆತಂಕಕಾರಿ ಎಂದರೆ ಕಿಡ್ನಿ ವೈಫಲ್ಯಕ್ಕೀಡಾಗುತ್ತಿದ್ದಂತೆ ವಿಷಕಾರಿ ತ್ಯಾಜ್ಯಗಳು ಶೇಖರಣೆಯಾಗುತ್ತಾ ಸಾಗುತ್ತದೆ. ಕೊನೆಗೆ ಅದು ಹೃದಯದ ಕಾರ್ಯವೈಖರಿ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಆದ್ದರಿಂದ ಹೃದ್ರೋಗ ಚಿಕಿತ್ಸೆ ಅಥವಾ ಕಿಡ್ನಿ ಚಿಕಿತ್ಸೆ ಎಂದು ಪ್ರತ್ಯೇಕಗೊಳಿಸದೆ ಎರಡರತ್ತಲೂ ಗಮನಹರಿಸುವುದು ಕ್ಷೇಮ. ಅದಕ್ಕೇ ಹೇಳಿದ್ದು ಕಿಡ್ನಿ ಸಮಸ್ಯೆ ಕಾಣಿಸಿಕೊಂಡರೆ ಒಮ್ಮೆ ನಿಮ್ಮ ಹೃದಯವನ್ನು ಮುಟ್ಟಿನೋಡಿಕೊಳ್ಳಿ. ಪ್ರತಿ ವರ್ಷ ಮಾರ್ಚ್ 10ರಂದು ವಿಶ್ವ ಕಿಡ್ನಿ ದಿನ ಆಚರಿಸಲಾಗುತ್ತದೆ. ಕನಿಷ್ಠ ಈ ಸಂದರ್ಭದಲ್ಲಾದರೂ ಜನ ತಮ್ಮ ಕಿಡ್ನಿಗಳ ಕಡೆ ನೋಡಿಕೊಳ್ಳಲಿ ಎಂದು.

Tuesday, April 17, 2012

ಮೂತ್ರಪಿ೦ಡದ ಅಥವಾ ಕಿಡ್ನಿ ಸಮಸ್ಯೆಯಿದ್ದರೆ ದಾಳಿಂಬೆ ಜ್ಯೂಸ್ ಕುಡಿಯಿರಿ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರು ದಾಳಿಂಬೆ ಜ್ಯೂಸ್ ಸೇವಿಸುವುದರಿಂದ ಹೆಚ್ಚಿನ ಉಪಯೋಗ ಪಡೆಯಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಅಷ್ಟೇ ಅಲ್ಲ, ದಾಳಿಂಬೆ ಜ್ಯೂಸ್ ನಿಂದ ದೇಹದಲ್ಲಿನ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸಬಹುದು ಎಂದು ತಿಳಿಸಿಕೊಟ್ಟಿದೆ. ದಾಳಿಂಬೆ ಜ್ಯೂಸ್ ನಲ್ಲಿ ದೇಹಕ್ಕೆ ಅತ್ಯವಶ್ಯಕವಾದ ಆಂಟಿಯಾಕ್ಸಿಡಂಟ್ ಇರುವುದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚು ಆರೋಗ್ಯವನ್ನು ನೀಡುತ್ತದೆ ಎನ್ನಲಾಗಿದೆ. ಇಸ್ರೇಲ್ ನ ವೆಸ್ಟರ್ನ್ ಮೆಡಿಕಲ್ ಸೆಂಟರ್ ನಡೆಸಿದ ಸಂಶೋಧನೆಯಿಂದ ಈ ಅಂಶ ತಿಳಿದುಬಂದಿದೆ. ಕಿಡ್ನಿ ಸಮಸ್ಯೆಯ ರೋಗಿಗಳಲ್ಲಿ ಹೃದಯದ ತೊಂದರೆಗೆ ಎಡೆಮಾಡಿಕೊಡುವ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಂಶದ ಮೇಲೆ ದಾಳಿಂಬೆ ಜ್ಯೂಸ್ ಸೇವನೆ ಯಾವ ರೀತಿ ದೀರ್ಘಕಾಲಿಕ ಪರಿಣಾಮ ಬೀರುತ್ತದೆ ಎಂಬುದಾಗಿ ಸಂಶೊಧನೆ ನಡೆಸಿದಾಗ ಈ ಫಲಿತಾಂಶ ದೊರೆತಿದೆ. ಸಂಶೋಧನೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 101 ರೋಗಿಗಳನ್ನು ಒಳಪಡಿಸಿ, ವಾರದಲ್ಲಿ ಮೂರು ಬಾರಿ 3 1/2 ಔನ್ಸ್ ದಾಳಿಂಬೆ ಜ್ಯೂಸ್ ಸೇವಿಸಲು ಹೇಳಲಾಯಿತು. ಒಂದು ವರ್ಷದ ನಂತರ ಸಂಶೋಧನೆಗೆ ಒಳಪಡಿಸಿದ ರೋಗಿಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದಾಗಿ ಸಂಶೋಧನೆ ತಿಳಿಸಿದೆ. ಅಷ್ಟೇ ಅಲ್ಲ, ದಾಳಿಂಬೆ ಜ್ಯೂಸ್ ಸೇವನೆಯಿಂದ ರೋಗಿಗಳಲ್ಲಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಆರೋಗ್ಯಕರವಾಗಿದ್ದು, ಹೃದಯಕ್ಕೆ ರಕ್ತ ಸಂಚಲನ ಮಾಡುವ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ತಡೆದು ಹೃದಯ ಸ್ತಂಭನವಾಗುವ ಸಾಧ್ಯತೆಯನ್ನೂ ನಿವಾರಿಸಿರುವುದಾಗಿ ಕಂಡುಬಂದಿದೆ.

ಮೂತ್ರಪಿ೦ಡದ ಅಥವಾ ಕಿಡ್ನಿ ಸಮಸ್ಯೆಯಿದ್ದರೆ ಈ ಆಹಾರ ಮುಟ್ಟಲೇಬೇಡಿ

ಮೂತ್ರಪಿ೦ಡದ ಅಥವಾ ಕಿಡ್ನಿ ಸಮಸ್ಯೆಯಿದ್ದರೆ ಈ ಆಹಾರ ಮುಟ್ಟಲೇಬೇಡಿ
ರೋಗ ಬಂದ ಮೇಲೆ ಅದನ್ನು ನಿವಾರಿಸಲು ಪರಿತಪಿಸುವುದಕ್ಕಿಂತ ಮುನ್ನವೇ ಪರಿಹರಿಸುವುದು ಲೇಸು. ಆದರೆ ಅಸಮರ್ಪಕ ಜೀವನಶೈಲಿ ಕಿಡ್ನಿ ಆರೋಗ್ಯವನ್ನು ಹಾಳುಗೆಡಹಿದ್ದರೆ ಇನ್ನಾದರೂ ಎಚ್ಚರವಹಿಸಲೇಬೇಕು. ಇಲ್ಲದಿದ್ದರೆ ಸಮಸ್ಯೆ ಇನ್ನೂ ಮಾರಕವಾಗಬಹುದು. ಸಮಸ್ಯೆ ದ್ವಿಗುಣಗೊಳ್ಳುವುದನ್ನು ತಪ್ಪಿಸಲು ಇರುವ ಮಾರ್ಗವೆಂದರೆ ಕಿಡ್ನಿಗೆ ಮಾರಕವಾಗಬಹುದಾದ ಕೆಲವು ಆಹಾರಗಳ ಸೇವನೆಯನ್ನು ತ್ಯಜಿಸುವುದು. ಕಿಡ್ನಿ ಸಮಸ್ಯೆಯಿದ್ದವರು ನಿರ್ದಿಷ್ಟ ಆಹಾರವನ್ನು ದೂರವಿಡಲೇಬೇಕು. ಅಂತಹ ಆಹಾರಗಳು ಯಾವುವೆಂದು ಇಲ್ಲಿ ತಿಳಿದುಕೊಳ್ಳಿ. ಕಿಡ್ನಿ ಸಮಸ್ಯೆಯಿದ್ದವರು ದೂರವಿಡಬೇಕಾದ ಆಹಾರ: 1. ಮಾಂಸಾಹಾರ ಸೇವನೆ: ಕಿಡ್ನಿ ತೊಂದರೆಗೆ ಒಳಗಾಗಿದೆ ಎಂದು ತಿಳಿಯುತ್ತಿದ್ದಂತೆ ಅಂತಹವರಿಗೆ ಮೊದಲು ಮಾಂಸಾಹಾರ ನಿಲ್ಲಿಸುವಂತೆ ಸಲಹೆ ನೀಡಲಾಗುತ್ತೆ. ಮಾಂಸ ಮತ್ತು ಮೀನಿನಲ್ಲಿ ಫಾಸ್ಪರಸ್ ಇರುವುದರಿಂದ ಕಿಡ್ನಿಗೆ ಒಳ್ಳೆಯದಲ್ಲ. ಕಿಡ್ನಿ ಮೊದಲೇ ಹಾಳಾಗಿರುವುದರಿಂದ ಇದರ ಸೇವನೆ ಇನ್ನಷ್ಟು ಆರೋಗ್ಯವನ್ನು ಕೆಡಿಸುತ್ತದೆ. ಇದು ರಕ್ತದಲ್ಲಿ ಯುರಿಕ್ ಆಸಿಡ್ ಹೆಚ್ಚಾಗಿಸಿ ಇದರಿಂದ ಕೀಲು ನೋವನ್ನೂ ತರುತ್ತದೆ. 2. ಟೀ, ಕಾಫಿ, ದ್ರಾಕ್ಷಿ: ಆಕ್ಸಾಲಿಕ್ ಆಸಿಡ್ ಹೊಂದಿರುವ ಆಹಾರ ಕಿಡ್ನಿ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಆಕ್ಸಲೇಟ್ ಎಂಬ ಅಂಶ ಕಿಡ್ನಿಯ ಆರೋಗ್ಯವನ್ನು ಕೆಡಿಸುತ್ತದೆ. ಟೀ, ಕಾಫಿ, ದ್ರಾಕ್ಷಿ, ಕಿತ್ತಳೆ ಮುಂತಾದ ಆಹಾರಗಳು ಆಕ್ಸಲೇಟ್ ಉತ್ಪತ್ತಿ ಮಾಡುತ್ತದೆ. ಈ ಆಹಾರಗಳು ಕಿಡ್ನಿಯಲ್ಲಿ ಕಲ್ಲನ್ನು ತರುವುದರಿಂದ ಇವುಗಳಿಂದ ದೂರವುಳಿಯುವುದು ಒಳ್ಳೆಯದು. 3. ಉಪ್ಪು, ಉಪ್ಪಿನ ಕಾಯಿ: ಕಿಡ್ನಿ ತೊಂದರೆಯಿದ್ದವರು ಹೆಚ್ಚು ಉಪ್ಪನ್ನು ತಿನ್ನಬಾರದು. ಕಿಡ್ನಿ ಅಸಮರ್ಪಕ ಕಾರ್ಯನಿರ್ವಹಣೆಗೂ ಮತ್ತು ರಕ್ತದೊತ್ತಡಕ್ಕೂ ನಡುವೆ ಸಂಬಂಧವಿದೆ. ಆದ್ದರಿಂದ ಉಪ್ಪನ್ನು ಆದಷ್ಟು ಕಡಿಮೆ ತಿನ್ನಬೇಕು. ಶೇಖರಿಸಿಟ್ಟ ಆಹಾರ ಮತ್ತು ಉಪ್ಪಿನಕಾಯಿಯನ್ನೂ ತಿನ್ನಬಾರದು. ಏಕೆಂದರೆ ಶೇಖರಿಸಿಟ್ಟ ಆಹಾರದಲ್ಲಿ ಕಿಡ್ನಿಗೆ ಮಾರಕವಾಗುವ ಸೋಡಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. * ಹಣ್ಣುಗಳು: ಕಿಡ್ನಿ ಸ್ವಾಸ್ಥ್ಯ ಹದಗೆಟ್ಟಿದ್ದರೆ ಪೊಟಾಶಿಯಂ ಹೆಚ್ಚಿರುವ ಆಹಾರ ಒಳ್ಳೆಯದಲ್ಲ. ಹಣ್ಣುಗಳನ್ನು ಮತ್ತು ಕೆಲವು ಹಸಿರು ಎಲೆಗಳುಳ್ಳ ತರಕಾರಿಗಳನ್ನು ಇಂತಹವರು ತಿನ್ನಬಾರದು. ಪೊಟಾಶಿಯಂ ಹೆಚ್ಚಿರುವ ಆಹಾರ ಸೇವಿಸಿದರೆ ದೇಹದಲ್ಲಿ ನೀರು ಅಧಿಕ ಮಟ್ಟದಲ್ಲಿ ಸೇರಿಕೊಂಡು ತೊಂದರೆಯುಂಟಾಗುತ್ತದೆ. * ಚಾಕಲೇಟ್, ಹಾಲು: ನೀವು ಚಾಕಲೇಟ್ ಪ್ರಿಯರಾಗಿದ್ದರೆ ನಿಮಗೆ ಕಹಿ ಸುದ್ದಿ. ಎಲ್ಲಾ ಕೊಕೊ ಉತ್ಪನ್ನಗಳು, ಚಾಕಲೇಟ್, ಹಾಲು, ಹಾಲಿನ ಉತ್ಪನ್ನ, ಬೀಜ, ಡ್ರೈ ಫ್ರೂಟ್ಸ್ ಇವೆಲ್ಲವೂ ಕಿಡ್ನಿಗೆ ತೊಂದರೆಯುಂಟು ಮಾಡುತ್ತದೆ. ಕಿಡ್ನಿಯಲ್ಲಿ ಹೆಚ್ಚು ಫಾಸ್ಪರಸ್ ಅಂಶ ಸೇರಿಕೊಂಡರೆ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

ಮೂತ್ರಪಿ೦ಡದ ಅಥವಾ ಕಿಡ್ನಿ ಆರೋಗ್ಯಕ್ಕೆ ಎಷ್ಟು ನೀರು ಕುಡಿಯಬೇಕು?

ಮೂತ್ರಪಿ೦ಡದ ಅಥವಾ ಕಿಡ್ನಿ ಆರೋಗ್ಯಕ್ಕೆ ಎಷ್ಟು ನೀರು ಕುಡಿಯಬೇಕು?
ಕಿಡ್ನಿ ಸಮಸ್ಯೆಗೆ ನೀರಿನ ಸೇವನೆ ಸುಲಭ ಚಿಕಿತ್ಸೆ ಎನ್ನಲಾಗಿದೆ. ಮೂತ್ರನಾಳಕ್ಕೆ ಸಂಬಂಧಿಸಿದ ಸೋಂಕಿಗೂ ನೀರು ಉತ್ತಮ ಪರಿಹಾರ. ಆದರೆ ಕಿಡ್ನಿ ಆರೋಗ್ಯವಾಗಿರಬೇಕಾದರೆ ನೀರಿನ ಅವಶ್ಯಕತೆ ಎಷ್ಟಿದೆ ಎಂದು ತಿಳಿಯಲು ಕೆಲವು ಅಂಶಗಳನ್ನು ನೀಡಲಾಗಿದೆ. ಕಿಡ್ನಿ ಆರೋಗ್ಯದಲ್ಲಿ ನೀರಿನ ಪಾತ್ರ ಏನು? * ಕಿಡ್ನಿಗೆ ನೀರು ಎಷ್ಟಿರಬೇಕು?: ಸಾಮಾನ್ಯವಾಗಿ 8ರಿಂದ 10 ಗ್ಲಾಸ್ ನೀರು ದೇಹಕ್ಕೆ ಅವಶ್ಯಕ. ತುಂಬಾ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯ ರೆನಲ್ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ಆರ್ಗಿನೈನ್ ವ್ಯಾಸೊಪ್ರೆಸಿನ್ ಹಾರ್ಮೋನ್ ನೀರಿನಂಶ ನಿಯಂತ್ರಿಸಿ ರೆನಲ್ ಕಾರ್ಯ ನೋಡಿಕೊಳ್ಳುತ್ತದೆ. ನೀರನ್ನು ಅತಿಯಾಗಿ ಕುಡಿದರೆ ಇದೂ ಕೂಡ ತೊಂದರೆಗೀಡಾಗಬಹುದು. * ಕಿಡ್ನಿ ಮೇಲೆ ನೀರಿನ ಪರಿಣಾಮ: ತುಂಬಾ ಕಡಿಮೆ ಮಟ್ಟದಲ್ಲಿ ನೀರು ಕುಡಿದರೂ ತೊಂದರೆ ಅನುಭವಿಸಬೇಕಾಗುತ್ತದೆ. ಇದು ರೆನಲ್ ಲಿಥಿಯಾಸಿಸ್ ಮತ್ತು ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತದೆ. * ಕಿಡ್ನಿ ಕಲ್ಲು ಹೇಗೆ ಬರುತ್ತೆ?: ಸ್ವಲ್ಪವೇ ನೀರನ್ನು ಕುಡಿಯುವವರಲ್ಲಿ ಕಿಡ್ನಿಯಲ್ಲಿ ಉಪ್ಪಿನಂಶ ಉಂಟಾಗಿ ಅದು ಕಿಡ್ನಿಯಲ್ಲಿ ಕಲ್ಲುಗಳನ್ನೂ ಉಂಟುಮಾಡುತ್ತದೆ. ಇದು ಹೀಗೆ ಮುಂದುವರೆದರೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತದೆ. * ಹೆಚ್ಚು ನೀರು ಕುಡಿದರೆ ಏನಾಗುತ್ತದೆ?: ಹೆಚ್ಚು ನೀರನ್ನು ಕುಡಿದರೆ ಕಲ್ಮಶವೆಲ್ಲಾ ಹೋಗಿ ಕಿಡ್ನಿ ಆರೋಗ್ಯವಾಗಿರುತ್ತದೆ ಎಂಬ ನಂಬಿಕೆ ಕೆಲವರಲ್ಲಿದೆ. ಆದರೆ ಇದು ಪೂರ್ತಿ ಸತ್ಯವಲ್ಲ. ನೀರು ಕುಡಿಯುವುದರಿಂದ ಗ್ಲೊಮೆರುಲ್ ಫಿಲ್ಟರೇಶನ್ ಗೆ ಸಹಾಯ ಮಾಡುತ್ತದೆ. ಆದರೆ ಅತಿಯಾಗಿ ನೀರು ಕುಡಿಯುವುದರಿಂದ ಹೆಚ್ಚು ಒತ್ತಡ ಹಾಕಿದಂತಾಗಿ ಈ ಕಾರ್ಯವೂ ಬಲಹೀನಗೊಳ್ಳುತ್ತದೆ.

ಮೂತ್ರಪಿಂಡದ ಕಲ್ಲುಗಳು

ಮೂತ್ರಪಿಂಡದ ಕಲ್ಲುಗಳು
ಮೂತ್ರಪಿಂಡದಲ್ಲಿರುವ ಕಲ್ಲುಗಳೆಂದರೆ ಪುಟಾಣಿ ಹರಳುಗಳನ್ನು ಹೊಂದಿರುವ ಘನೀಕೃತ ಮೊತ್ತ. ಮೂತ್ರಪಿಂಡದಲ್ಲಿ ಏಕಕಾಲಕ್ಕೆ ಒಂದು ಅದಕ್ಕಿಂತ ಹೆಚ್ಚು ಕಲ್ಲುಗಳಿರಬಹುದು. ಇತರೆ ಹೆಸರುಗಳು:- ರೀನಲ್ ಕ್ಯಾಕ್ಯಲಿ; ನೆಫ್ರೋಲಿಟೈಸಿಸ್, ಕಾರಣಗಳು: ಕ್ಯಾಲ್ಸಿಯಂ ಕಲ್ಲುಗಳು ಬಹು ಸಾಮಾನ್ಯ. ಮಹಿಳೆಯರಿಗಿಂತ ಪುರುಷರಲ್ಲಿ, ಅದೂ 20-30 ವಯೋಮಾನದವರಲ್ಲಿ ಇದು ಎರಡು ಅಥವಾ ಮೂರು ಪಟ್ಟು ಹೆಚ್ಚು ಸಾಮಾನ್ಯ. ಪುನರಾವೃತ್ತಿಯ ಸಾಧ್ಯತೆ ಹೆಚ್ಚು. ಕ್ಯಾಲ್ಸಿಯಂ ಇದರ ಅಂಶಗಳು ಅಂದರೆ, ಆಕ್ಸಲೇಟ್, ಫಾಸ್ಫೇಟ್, ಕಾರ್ಬೋನೇಟುಗಳಾಗಿ ರೂಪುಗೊಂಡು ಹರಳುಗಳಾಗುತ್ತವೆ. ಹಲವು ಆಹಾರ ಪದಾರ್ಥಗಳಲ್ಲಿ ಆಕ್ಸಲೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸಣ್ಣ ಕರುಳಿಗೆ ಸಂಬಂಧಿಸಿದ ರೋಗಗಳಿದ್ದಲ್ಲಿ, ಅದರಿಂದ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳು ರೂಪುಗೊಳ್ಳುವ ಸಾಧ್ಯತೆ ಜಾಸ್ತಿ. ಪುರುಷರಲ್ಲಿ ಯೂರಿಕ್ ಆಸಿಡ್ ಕಲ್ಲುಗಳೂ ಸಾಮಾನ್ಯ. ಕೆಮೋಥೆರಪಿಯೊಂದಿಗೆ ಅವು ತಳಕು ಹಾಕಿಕೊಂಡಿವೆ. ಯೂರಿಕ್ ಆಸಿಡ್ ಕಲ್ಲುಗಳೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತವೆ. ಸಿಸ್ನ್ಯೂರಿಯಾ ಸಮಸ್ಯೆಯಿಂದ ನರಳುವವರಲ್ಲಿ ಸಿಸ್ಟೈನ್ ಕಲ್ಲುಗಳು ಸಾಮಾನ್ಯ. ಪುರುಷ ಹಾಗೂ ಮಹಿಳೆಯರಿಬ್ಬರಲ್ಲಿ ಕಾಣಸಿಗುವ ಈ ಸಮಸ್ಯೆ ಮೂಲತಃ ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ. ಮೂತ್ರಕೋಶ ಅಂಗವ್ಯೂಹದಲ್ಲಿನ ಸೋಂಕಿನ ಪರಿಣಾಮವಾಗಿ ಕಾಣಿಸಿಕೊಳ್ಳುವುದು ಸ್ಟ್ರುವೈಟ್ ಕಲ್ಲುಗಳು ಮಹಿಳೆಯರಿಗೆ ಮಾತ್ರ. ಮೂತ್ರ ಪಿಂಡ, ಮೂತ್ರ ಕೋಶ ಹಾಗೂ ಮೂತ್ರನಾಳಕ್ಕೆ ಅಡ್ಡಿಯುಂಟು ಮಾಡುವಷ್ಟು ದೊಡ್ಡದಾಗಬಹುದು. ಇತರ ಪದಾರ್ಥಗಳು ಹರಳುಗಟ್ಟಿ, ಘನರೂಪ ತಾಳಿ, ಕಲ್ಲುಗಳಾಗಿ ರೂಪಗೊಳ್ಳಬಹುದು. ಲಕ್ಷಣಗಳು: ಕಿಬ್ಬೊಟ್ಟೆಯಲ್ಲಿ ಅಳ್ಳೆಯಲ್ಲಿ ನೋವು ಅಥವಾ ಬೆನ್ನು ನೋವು ನೋವು ಕ್ರಮೇಣ ಹೆಚ್ಚುತ್ತದೆ ಹೆಚ್ಚು ತೀವ್ರ ಹೊಟ್ಟೆ ನೋವು ಕಿಬ್ಬೊಟ್ಟೆಗೆ, ಸೊಂಟದಲ್ಲಿ, ಗುಪ್ತಾಂಗಗಳಿಂದ ಹೊರ ಸೂಸುವ ನೋವು ತಲೆ ಸುತ್ತುವಿಕೆ, ವಾಂತಿ ಪದೇ ಪದೇ ಮೂತ್ರ ವಿಸರ್ಜನೆ, ತುರ್ತು ವಿಸರ್ಜನೆ ಅಥವಾ ವಿಸರ್ಜಿಸುವ ಒತ್ತಡ ಮೂತ್ರದಲ್ಲಿ ರಕ್ತ ಹೊಟ್ಟೆ ನೋವು ಮೂತ್ರ ವಿಸರ್ಜಿಸುವಾಗ ನೋವು ರಾತ್ರಿ ಸಮಯದಲ್ಲಿ ಹೆಚ್ಚಿದ ಮೂತ್ರ ವಿಸರ್ಜನೆ ಮೂತ್ರ ಮಾಡಲು ಹಿಂಜರಿಕೆ ವೃಷಣಗಳಲ್ಲಿ ನೋವು ಗೆಜ್ಜೆಯಲ್ಲಿ ನೋವು ಜ್ವರ ನಡುಕ ಅಸಹಜವಾದ ಮೂತ್ರದ ಬಣ್ಣ. ತಪಾಸಣೆ ಹಾಗೂ ಪರೀಕ್ಷೆಗಳು: ಮಾದಕ ವಸ್ತುಗಳನ್ನು ಬಳಸುವಷ್ಟು ತೀವ್ರ ನೋವು. ಹೊಟ್ಟೆ ಅಥವಾ ಬೆನ್ನು ಸ್ಪರ್ಶಿಸಿದಾಗ ತೀರಾ ಮೃದು. ಕಲ್ಲುಗಳು ದೊಡ್ಡದಾಗಿದ್ದಷ್ಟು, ಪದೇ ಪದೇ ಕಾಣಿಸಿಕೊಂಡರೆ ಅದು ಮೂತ್ರಪಿಂಡ ವೈಫಲ್ಯದ ಸಂಕೇತ.  ಒತ್ತಡ ಪೂರ್ವಕವಾಗಿ ವಿಸರ್ಜಿಸಿದಾಗ, ಮೂತ್ರ ನಾಳದಲ್ಲಿ ಕಲ್ಲುಗಳು ಬರಬಹುದು.  ಈ ಕಲ್ಲುಗಳನ್ನು ಅವಲೋಕಿಸಿದಾಗ, ಕಲ್ಲಿನ ವಿಧ ಪತ್ತೆಯಾಗುತ್ತದೆ.  ಮೂತ್ರದ ತಪಾಸಣೆಯಿಂದ ಕಲ್ಲುಗಳು ಹಾಗೂ ಕೆಂಪು ರಕ್ತದ ಕಣಗಳನ್ನು ಪತ್ತೆ ಹಚ್ಚಬಹುದು.  ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಿರುತ್ತದೆ. ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಈ ಕೆಳಕಂಡ ವಿಧಾನದಿಂದ ಪತ್ತೆ ಹಚ್ಚಬಹುದು:  ಮೂತ್ರಪಿಂಡದ ಅಲ್ಪ್ಟಾ ಸೌಂಡ್  ಐವಿಪಿ (ಇಂಟ್ರಾವೀನಸ್ ಪೈಲೋಗ್ರಾಮ್)  ಹೊಟ್ಟೆಯ ಕ್ಷ-ಕಿರಣಗಳು  ಸಂಪ್ರದಾಯಿಕ ಪೈಲೋಗ್ರಾಮ್  ಹೊಟ್ಟೆಯ ಸಿಟಿ ಸ್ಕ್ಯಾನ್  ಹೊಟ್ಟೆಯ/ ಮೂತ್ರಪಿಂಡದ MRI ಈ ತಪಾಸಣೆಗಳು ರಕ್ತ ಅಥವಾ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರಬಹುದು.  ಮೂತ್ರನಾಳದ ಸೋಂಕು  ಮೂತ್ರನಾಳದಲ್ಲಿ ಅಡಚಣೆ,  ಮೂತ್ರಪಿಂಡಗಳಿಗೆ ಹಾನಿ,  ಹಾನಿಗೊಂಡ ಮೂತ್ರದ ಕಾರ್ಯ ಕ್ಷಮತೆ ತಗ್ಗಬಹುದು ಅಥವಾ ಸಂಪೂರ್ಣ ನಿಲ್ಲಬಹುದು. ತಡೆಯುವುದು ಮೂತ್ರಪಿಂಡ ಕಲ್ಲುಗಳಿದ್ದವರು, ಹೆಚ್ಚೆಚ್ಚು ನೀರು ಕುಡಿಯಬೇಕು. ಇದರಿಂದ, ಮೂತ್ರದ ಸಾರ ಕಡಿಮೆಯಾಗುತ್ತದೆ. ದಿನಕ್ಕೆ 6-8 ಗ್ಲಾಸು ನೀರನ್ನು ಕುಡಿಯಬೇಕು. ಮೂತ್ರದಲ್ಲಿರುವ ಕಲ್ಲಿನ ವಿಧವನ್ನು ಗುರುತಿಸಿ, ಚಿಕಿತ್ಸಾ ಕ್ರಮವನ್ನು ರೂಪಿಸಬೇಕು.

ಮೂತ್ರಪಿಂಡಗಳು

ಮೂತ್ರಪಿಂಡಗಳು ಮಾನವ ಶರೀರದ ಅತ್ಯಾವಶ್ಯಕ ಅಂಗಗಳಲ್ಲಿ ಮೂತ್ರಪಿಂಡಗಳೂ ಮುಖ್ಯ. ಇವು ಎರಡಿವೆ. ಇವು ಉದರದ ಹಿಂಭಾಗದ ಗೋಡೆಯಲ್ಲಿ, ಬೆನ್ನೆಲುಬಿನ ಎರಡೂ ಪಕ್ಕಗಳಲ್ಲಿ ಸ್ಥಾಪಿತವಾಗಿವೆ. ಒಂದೊಂದೂ ಸುಮಾರು 250 ಗ್ರಾಂ ತೂಗುತ್ತವೆ ಮತ್ತು 10ರಿಂದ 12 ಸೆಂ.ಮೀ. ಉದ್ದದ, ಹುರಳೀ ಬೀಜದ ಆಕಾರದಲ್ಲಿದೆ. ಮೂತ್ರಪಿಂಡ ಕ್ರಿಯೆಗಳು: ಮೊದಲನೆಯದು-ರಕ್ತದಲ್ಲಿನ ಕಲ್ಮಶಗಳನ್ನು ಶೋಧಿಸಿ, ಮೂತ್ರದ ರೂಪದಲ್ಲಿ ಹೊರಕಾಕಿ, ಶುದ್ಧ ರಕ್ತವನ್ನು ಶರೀರಕ್ಕೆ ಹಿಂದಿರುಗಿಸುವುದು. ಎರಡನೆಯದು- ಶರೀರಾವಶ್ಯಕವಾದ ನೀರು ಮತ್ತು ಖನಿಜಗಳನ್ನು ಆರೋಗ್ಯ ರಕ್ಷಣೆಗೆ ತಕ್ಕಷ್ಟು ಉಳಿಸುವ ನಿಯಂತ್ರಣ ಮೂರನೆಯದು- ಶರೀರದ ಇತರ ಕ್ರಿಯೆಗಳನ್ನು ನಿಯಂತ್ರಿಸುವ ಚೋದಕ ಗಳನ್ನು ಉತ್ಪಾದಿಸುವುದು. ಹೀಗೆ ದೇಹದ ಅನೇಕ ಅಂಗ, ಅಂಗಾಂಶಗಳು ತಮ್ಮ ಕ್ಲಪ್ತ ಕ್ರಿಯೆಗಳಿಗೆ, ಮೂತ್ರಪಿಂಡಗಳ ಸುಸ್ಥಿತಿಯನ್ನಪೇಕ್ಷಿಸು ತ್ತದೆ. ಯಾವಾಗ ಮೂತ್ರಪಿಂಡಗಳ ಕ್ರಿಯೆ ರೋಗಗಳಿಂದ ಸರಿಯಾಗಿ ನಡೆಯುವು ದಿಲ್ಲವೋ, ಅಥವಾ ಪೂರ್ಣ ವಿಫಲ ಗೊಳ್ಳುವವೋ ಆಗ ಮೂತ್ರಪಿಂಡಗಳ ‘ಬದಲು ಚಿಕಿತ್ಸೆ’ ಅಂದರೆ ಯಾಂತ್ರಿಕ ಮೂತ್ರಪಿಂಡ ಚಿಕಿತ್ಸೆ ಅಥವಾ ಬದಲೀ ಮೂತ್ರಪಿಂಡ ಕಸಿ ಚಿಕಿತ್ಸೆ ಅಗತ್ಯ ಬೀಳುತ್ತದೆ. ಮೂತ್ರಪಿಂಡಗಳ (kidney ) ಸಾಮಾನ್ಯ ರೋಗಗಳು: -ಮೂತ್ರಪಿಂಡಗಳ ವೈಫಲ್ಯ (kidney failure) - ಮೂತ್ರಪಿಂಡಗಳ ಸೋಂಕುಗಳು -ಮೂತ್ರಪಿಂಡಗಳ ಕಲ್ಲುಗಳ ತೊಂದರೆ (kidney stone disease)